ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಎಲ್ಲರಿಗೂ ಕೆಲಸ ಸಿಗುವುದು ಅಸಾಧ್ಯ. ಸರಕಾರ ಕೂಡ ಈ ವಿಷಯದಲ್ಲಿ ಏನೂ ಮಾಡಲಾಗದು. ನಮ್ಮ ದೇಶದಲ್ಲಿ ಸಣ್ಣ ಉದ್ದಿಮೆದಾರರ ಮತ್ತು ಸ್ವಂತ ಕೆಲಸವನ್ನು ಮಾಡುವವರ ಸಂಖ್ಯೆ ಬಹಳವಿದೆ. ಬದುಕಿನ ಬಂಡಿ ಹೊಡೆಯಲು ಏನಾದರೂ ಮಾಡಬೇಕಲ್ಲ! ಹೀಗಾಗಿ ಇಂತಹ ಉದ್ದಿಮೆಗಳು ಭಾರತದ ಜಿಡಿಪಿಯ 40 ಪ್ರತಿಶತವನ್ನು ಪ್ರತಿನಿಧಿಸುತ್ತದೆ ಎನ್ನುವುದು ಅದರ ಮಹತ್ವವನ್ನು ತಿಳಿಸುತ್ತದೆ.

ಇವುಗಳಲ್ಲಿ ಕೂಡ ಒಂದಷ್ಟು ದೊಡ್ಡ ಮಟ್ಟದ ವ್ಯಾಪಾರ ನಡೆಸುವ ಸಂಸ್ಥೆಗಳಿಗೆ ವ್ಯಾಪಾರದಲ್ಲಿ ನೋಡಬೇಕಾದ ಅಂಶಗಳ ಬಗ್ಗೆ ಮಾಹಿತಿ ಸಿಗುತ್ತದೆ. ಆಯಾ ವಲಯದ ತಜ್ಞರನ್ನು ಅವರು ಸಲಹೆ ಕೇಳುವ ಮತ್ತು ಅವರ ಶುಲ್ಕವನ್ನು ಬರಿಸುವ ಶಕ್ತಿಯನ್ನು ಕೂಡ ಹೊಂದಿರುತ್ತಾರೆ. ಆದರೆ ಈ ವಲಯದಲ್ಲಿ ಬಹಳಷ್ಟು ಜನರಿಗೆ ಇದರ ಬಗ್ಗೆ ಮಾಹಿತಿ ಕೂಡ ಇರುವುದಿಲ್ಲ. ಬದುಕು ಸಾಗಿಸಲು ವ್ಯಾಪಾರ, ಸೇವೆ ನೀಡಬೇಕು ಎನ್ನುವ ದರ್ದಿಗೆ ಬಿದ್ದು ಕೆಲಸವನ್ನು ಮುಂದುವರಿಸುತ್ತಿರುತ್ತಾರೆ.

ಈಗಾಗಲೇ ಈ ರೀತಿ ಉದ್ದಿಮೆ ನಡೆಸುತ್ತಿರುವವರು ಮತ್ತು ಹೊಸದಾಗಿ ತಮ್ಮ ಉದ್ದಿಮೆ ಅಥವಾ ಸ್ವಂತ ಕೆಲಸವನ್ನು, ಸೇವೆಯನ್ನು ನೀಡ ಬಯಸುವವರು ಮೊದಲಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಒಂದಷ್ಟು ಅಂಶಗಳನ್ನು ತಿಳಿದುಕೊಳ್ಳುವುದು ಉತ್ತಮ. ಆ ನಿಟ್ಟಿನಲ್ಲಿ ಕೆಳಗಿನ ಕೆಲ ಅಂಶಗಳ ಬಗ್ಗೆ ತಿಳುವಳಿಕೆ ಪಡೆದುಕೊಳ್ಳುವುದು ಅತಿ ಮುಖ್ಯ.

ರಿಟರ್ನ್ ಆನ್ ಇನ್ವೆಸ್ಟ್ಮೆಂಟ್: ಈ ಅನುಪಾತವನ್ನು ಪ್ರತಿಶತದಲ್ಲಿ ಹೇಳಲಾಗುತ್ತದೆ. ನಿವ್ವಳ ಆದಾಯವನ್ನ ಒಟ್ಟು ಇನ್ವೆಸ್ಟ್ಮೆಂಟ್ ಮತ್ತು ಅದಕ್ಕಾಗಿ ತಲುಗಿದ ಖರ್ಚನ್ನ ಕೂಡ ಸೇರಿಸಿ ಅದರಿಂದ ಭಾಗಿಸಿ ಬರುವ ಬಾಗಲಬ್ದವನ್ನ 100 ರಿಂದ ಗುಣಿಸಿದಾಗ ಬರುವ ಉತ್ತರವನ್ನ ROI ಎನ್ನಲಾಗುತ್ತದೆ. ಇದು ಹೆಚ್ಚಿದಷ್ಟು ಒಳ್ಳೆಯದು, ಆದರೆ 7 ಪ್ರತಿಶತಕ್ಕಿಂತ ಹೆಚ್ಚಿದ್ದರೆ ಉತ್ತಮ , ಅದಕ್ಕಿಂತ ಜಾಸ್ತಿಯಿರುವುದರ ಮೇಲೆ ಹೂಡಿಕೆ ಮಾಡಬೇಕು. ಇದಕ್ಕಿಂತ ಕಡಿಮೆ ಇದ್ದಲ್ಲಿ ಹೂಡಿಕೆ ಮಾಡುವುದು ಅಷ್ಟು ಸಮಂಜಸವಲ್ಲ.

ಉದಾಹರಣೆ ನೋಡೋಣ. ನೆಟ್ ಇನ್ಕಮ್ 10, ಕಾಸ್ಟ್ ಆಫ್ ಇನ್ವೆಸ್ಟ್ಮೆಂಟ್ 100 ಇದ್ದು ಭಾಗಿಸಿದಾಗ ಬರುವ ಭಾಗಲಬ್ಧ 0.10 ಇದನ್ನ 100 ರಿಂದ ಗುಣಿಸಿದರೆ 10% ವನ್ನು ROI ಎನ್ನಬಹುದು. ಭಾಗಲಬ್ಧ 7 ಕ್ಕಿಂತ ಹೆಚ್ಚಿದ್ದರೆ ಹೂಡಿಕೆಗೆ ಉತ್ತಮ.

Return On Advertising Spend: ನಾವೆಲ್ಲಾ ನಾವು ಹೂಡಿದ ಹಣದ ಮೇಲೆ ಎಷ್ಟು ಲಾಭ ಪಡೆದೆವು ಎನ್ನುವುದನ್ನು ನೋಡುತ್ತೇವೆ. ಅಲ್ಲಿ ಲಾಭವೂ ಬಂದಿರಬಹುದು. ಆದರೆ ಆ ಲಾಭ ಅದೆಷ್ಟು ಹಣವನ್ನು ಜಾಹಿರಾತಿಗೆ ಖರ್ಚು ಮಾಡಿ ಗಳಿಸಿದ್ದೇವೆ ಎನ್ನುವುದರ ಜೊತೆಗೆ ಜಾಹಿರಾತಿಗೆ ಖರ್ಚು ಮಾಡಿದ ಹಣದ ಕಾರಣ ಅದೆಷ್ಟು ರೆವೆನ್ಯೂ ಬಂದಿತು ಎನ್ನುವುದನ್ನು ಕೂಡ ಲೆಕ್ಕ ಹಾಕಬೇಕಾಗುತ್ತದೆ.

ವರ್ಕಿಂಗ್ ಕ್ಯಾಪಿಟಲ್: ಇದು ಸಂಸ್ಥೆ ಯಾವ ಮಟ್ಟದಲ್ಲಿ ತನ್ನ ಬಂಡವಾಳವನ್ನ ತನ್ನ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದನ್ನ ತೋರಿಸುತ್ತದೆ. ಇದು ಹೆಚ್ಚಾಗಿದ್ದರೆ ಸಂಸ್ಥೆ ಉತ್ತಮವಾಗಿ ಬಂಡವಾಳವನ್ನ ಉಪಯೋಗ ಮಾಡಿಕೊಳ್ಳುತ್ತಿದೆ ಎಂದರ್ಥ. ಕಡಿಮೆಯಿದ್ದರೆ ಬಂಡವಾಳದ ಕೊರತೆ ಅಥವಾ ಸರಿಯಾದ ಬಳಕೆಯಾಗಿತ್ತಿಲ್ಲ ಎನ್ನುವುದನ್ನ ಈ ಅನುಪಾತ ಹೇಳುತ್ತದೆ. ಆದರೆ ಇದು ಬಹಳ ಹೆಚ್ಚಾದರೂ ಅಪಾಯ, ಬಹಳ ಕಡಿಮೆಯಾದರೂ ಅಪಾಯ. ಹೀಗಾಗಿ 1 ರಿಂದ 2 ರ ಅನುಪಾತವನ್ನ ಉತ್ತಮ ಅನುಪಾತ ಎನ್ನಬಹುದು. ಉದಾಹರಣೆ ನೋಡೋಣ:

ನೆಟ್ ಸೇಲ್ಸ್ 100 ಮತ್ತು ವರ್ಕಿಂಗ್ ಕ್ಯಾಪಿಟಲ್ 70 ಇದ್ದರೆ ಆಗ 100/70 = 1.43 ಆಗುತ್ತದೆ. 1 ರಿಂದ 2ರ ಅನುಪಾತವನ್ನ ಉತ್ತಮ ಅನುಪಾತ ಎನ್ನಬಹುದು.

ಹೊಸ ವಿಶ್ವ ವ್ಯವಸ್ಥೆಗೆ ಜಗತ್ತು ಸಿದ್ಧವಾಗಿದೆಯೇ? (ಹಣಕ್ಲಾಸು)
ಪ್ರಾಫಿಟ್ ಮಾರ್ಜಿನ್: ಒಟ್ಟು ಮಾರಾಟದಿಂದ ಎಷ್ಟು ಪ್ರತಿಶತ ಲಾಭವನ್ನ ಸಂಸ್ಥೆ ಕಂಡಿದೆ ಎನ್ನುವುದನ್ನ ಇದು ತಿಳಿಸುತ್ತದೆ. ಇದು ಹೆಚ್ಚಿದಷ್ಟು ಒಳ್ಳೆಯದು. ಕಡಿಮೆಯಾದಷ್ಟೂ, ಕೆಲಸ ಹೆಚ್ಚು ಲಾಭ ಕಡಿಮೆ ಎನ್ನುವುದನ್ನ ಇದು ತೋರಿಸುತ್ತದೆ. ಉದಾಹರಣೆಗೆ ಎಲ್ಲಾ ಖರ್ಚು ತೆರಿಗೆ ಇತ್ಯಾದಿಗಳನ್ನ ಕೊಟ್ಟು ನಂತರ ಉಳಿದ ನಿವ್ವಳ ಲಾಭವನ್ನ ಒಟ್ಟು ಮಾರಾಟದಿಂದ ಭಾಗಿಸಿ ಬರುವ ಭಾಗಲಬ್ದವನ್ನ 100 ರಿಂದ ಗುಣಿಸಿದಾಗ ಬರುವ ಉತ್ತರ ಪ್ರತಿಶತ ಅಥವಾ ಪರ್ಸಂಟೇಜ್ ನಲ್ಲಿರುತ್ತದೆ. ನೂರಕ್ಕೆ ಎಷ್ಟು ಪರ್ಸೆಂಟ್ ಲಾಭ ಎನ್ನುವುದನ್ನ ಇದು ತೋರಿಸುತ್ತದೆ.

ಬ್ರೇಕ್ ಈವನ್ ಪಾಯಿಂಟ್: ಯಾವಾಗ ಒಂದು ವ್ಯಾಪಾರದಲ್ಲಿನ ಖರ್ಚು ಮತ್ತು ಆದಾಯ ಸಮವಾಗುತ್ತದೆ, ಅಂತಹ ಸನ್ನಿವೇಶವನ್ನು ಬ್ರೇಕ್ ಈವನ್ ಎನ್ನಲಾಗುತ್ತದೆ. ಇದರರ್ಥ ಸಂಸ್ಥೆಯ ವಹಿವಾಟಿನಿಂದ ಸಂಸ್ಥೆಗೆ ಲಾಭವೂ ಆಗಿಲ್ಲ, ನಷ್ಟವೂ ಆಗಿಲ್ಲ ಎಂದಾಗುತ್ತದೆ. ಸಂಸ್ಥೆಯ ಪ್ರಾರಂಭಿಕ ಹಂತದಲ್ಲಿ ಈ ರೀತಿಯ ಸನ್ನಿವೇಶವನ್ನು ಒಪ್ಪಿಕೊಳ್ಳಬಹುದು. ಆದರೆ ಆ ನಂತರ ಲಾಭಗಳಿಸ ಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ಸಂಸ್ಥೆ ಹೆಚ್ಚು ಕಾಲ ನಡೆಯಲು ಸಾಧ್ಯವಿಲ್ಲ.

ರೆವೆನ್ಯೂ ರನ್ ರೇಟ್: ನಿಗದಿತ ಸಮಯದಲ್ಲಿ ಎಷ್ಟು ರೆವೆನ್ಯೂ ಬಂದಿದೆ ಎನ್ನುವುದರ ಆಧಾರದ ಮೇಲೆ ವಾರ್ಷಿಕ ಎಷ್ಟು ರೆವೆನ್ಯೂ ಆಗಬಹುದು ಎಂದು ಅಂದಾಜಿಸುವುದಕ್ಕೆ ರೆವೆನ್ಯೂ ರನ್ ರೇಟ್ ಎನ್ನಲಾಗುತ್ತದೆ. ಉದಾಹರಣೆಗೆ ಒಂದು ವಾರದಲ್ಲಿ ಸಂಸ್ಥೆ 20 ಸಾವಿರ ರೂಪಾಯಿ ರೆವೆನ್ಯೂ ಜನರೇಟ್ ಮಾಡಿದ್ದರೆ ಆಗ 20 ಸಾವಿರವನ್ನು 7 ರಿಂದ ಭಾಗಿಸಬೇಕು. ಭಾಗಲಬ್ಧ 2857.15 ಇದನ್ನು 365ರಿಂದ ಗುಣಿಸಬೇಕು ಆಗ ಬರುವ ಫಲಿತಾಂಶ 10,42,857/- ಇದನ್ನು ರೆವೆನ್ಯೂ ರನ್ ಎನ್ನಬಹುದು.

ಅರ್ನಿಂಗ್ ಬಿಫೋರ್ ಇಂಟರೆಸ್ಟ್ ಅಂಡ್ ಟ್ಯಾಕ್ಸ್: ಇದನ್ನು ಎರಡು ವಿಧದಲ್ಲಿ ಲೆಕ್ಕ ಹಾಕಬಹುದು ಒಂದು, EBIT = Total revenue – Cost of goods sold – Operating expenses. ಮತ್ತು ಎರಡನೆಯ ರೀತಿ : EBIT = Net income + Taxes + Interest. ಸಂಸ್ಥೆ ತನ್ನ ಸಾಲಗಳ ಮೇಲೆ ನೀಡುವ ಬಡ್ಡಿ ಮತ್ತು ಲಾಭದ ಮೇಲಿನ ತೆರಿಗೆಗೆ ಮುಂಚೆ ಎಷ್ಟು ಆದಾಯವನ್ನು ಹೊಂದಿದೆ ಎನ್ನುವುದು ಅತ್ಯಂತ ಮುಖ್ಯ ಮಾಹಿತಿ. ಇದನ್ನು ತಿಳಿದುಕೊಂಡರೆ ವ್ಯಾಪಾರದ ನಿಜವಾದ ಶಕ್ತಿಯ ಪರಿಚಯ ಕೂಡ ಆಗುತ್ತದೆ. ಹೀಗಾಗಿ ಈ ಮಾಹಿತಿ ತಿಳಿದುಕೊಳ್ಳುವುದು ಅಗತ್ಯವಾಗಿದೆ.

Deepseek: ಮಾರುಕಟ್ಟೆಗೆ ಕೊಟ್ಟಿದೆ ಡೀಪ್ ಶಾಕ್! (ಹಣಕ್ಲಾಸು)
ಕೊನೆ ಮಾತು: ಮೇಲೆ ಹೇಳಿದ ಏಳು ಅಂಶಗಳು ತೀರಾ ಮೂಲಭೂತವಾಗಿ ವ್ಯಾಪಾರಸ್ಥರು ತಿಳಿದುಕೊಂಡಿರಬೇಕಾದ ಅಂಶಗಳು. ಇದರ ಜೊತೆಗೆ ಇನ್ನಷ್ಟು ಅಂಶಗಳನ್ನು ಕೂಡ ತಿಳಿದುಕೊಳ್ಳಬೆಳಗುತ್ತದೆ. ಆದರೆ ಒಟ್ಟಾರೆ ಇವುಗಳ ಬಗ್ಗೆ ಮಾಹಿತಿ ಇಲ್ಲದೆ ಹೆಜ್ಜೆ ಇಡುವಂತಿಲ್ಲ. ಗಮನಿಸಿ ನೋಡಿ ಸಾಮಾನ್ಯವಾಗಿ ನೂರರಲ್ಲಿ 90ಕ್ಕೂ ಹೆಚ್ಚು ವ್ಯಾಪಾರಗಳು ಮೊದಲ ಒಂದು ವರ್ಷದಲ್ಲಿ ಮುಚ್ಚಿ ಹೋಗುತ್ತವೆ. ಇದಕ್ಕೆ ಕಾರಣ ಮಾಹಿತಿಯಿಲ್ಲದೆ ವ್ಯಾಪಾರಕ್ಕೆ ಧುಮುಕುವುದು. ಎಲ್ಲಕ್ಕೂ ಮೊದಲು ನಾವು ಶುರು ಮಾಡಬೇಕಾಗಿರುವ ವ್ಯಾಪಾರಕ್ಕೆ ಎಷ್ಟರ ಮಟ್ಟಿನ ಬೇಡಿಕೆಯಿದೆ. ಎಲ್ಲಿ ಶುರು ಮಾಡಬೇಕು ಎಂದಿದ್ದೇವೆ ಮತ್ತು ಅಲ್ಲಿನ ಸ್ಪರ್ಧೆ ಹೇಗಿದೆ. ಇಂತಹ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳದೆ ಹೂಡಿಕೆ ಮಾಡಬಾರದು. ಇದರ ಜೊತೆಗೆ ನಾವು ಶುರು ಮಾಡುವ ವ್ಯಾಪಾರ ಅಥವಾ ಸೇವೆ ನಮ್ಮ ಗುಣಕ್ಕೆ, ವ್ಯಕ್ತಿತ್ವಕ್ಕೆ ಹೊಂದುತ್ತದೆಯೇ ಎನ್ನುವುದನ್ನು ಕೂಡ ಪರಿಶೀಲಿಸ ಬೇಕಾಗುತ್ತದೆ. ಇವೆಲ್ಲವುಗಳ ತಿಳುವಳಿಕೆ ಇಲ್ಲದೆ ವ್ಯಾಪಾರ ಮಾಡಬೇಕು ಎನ್ನುವ ಹಠಕ್ಕೆ ಬಿದ್ದು ವ್ಯಾಪಾರ ಶುರು ಮಾಡಬಾರದು. ಆದರೆ ನೆನಪಿರಲಿ ವ್ಯಾಪಾರ ಅಥವಾ ಸ್ವಂತ ಕೆಲಸ ಮಾಡದೆ ಬೇರೆ ದಾರಿಯೂ ಇಲ್ಲ.

Shares:

Related Posts

ಆರೋಗ್ಯ ಮತ್ತು ಜೀವನಶೈಲಿ

ಅಮೆರಿಕಾದಿಂದ ಗಡಿಪಾರಾದ 112 ಭಾರತೀಯರ 3ನೇ ಬ್ಯಾಚ್ ಇಂದು ಭಾರತಕ್ಕೆ

ಚಂಡೀಗಢ: ಅಮೆರಿಕದಿಂದ ಗಡೀಪಾರು ಮಾಡಲಾದ 112 ಭಾರತೀಯರು ಇರುವ ಅಮೆರಿಕ ವಾಯುಪಡೆಯ ವಿಶೇಷ ವಿಮಾನ C17 ಗ್ಲೋಬ್‌ಮಾಸ್ಟರ್ III ಇಂದು (ಫೆ.16 ರಂದು) ರಾತ್ರಿ ತಡರಾತ್ರಿ ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ನಿರೀಕ್ಷೆಯಿದೆ. ಅಮೆರಿಕದಿಂದ ಗಡಿಪಾರು ಮಾಡಲಾದ 112 ಜನರಲ್ಲಿ
ಆರೋಗ್ಯ ಮತ್ತು ಜೀವನಶೈಲಿ

ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಸೂಚ್ಯಂಕ; ದೇಶದಲ್ಲೇ ಕರ್ನಾಟಕಕ್ಕೆ ಅಗ್ರಸ್ಥಾನ

ಬೆಂಗಳೂರು: ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ) ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧ್ಯಯನದ ಪ್ರಕಾರ ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಶ್ರೇಯಾಂಕದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ. ರಾಜ್ಯಕ್ಕೆ ಈ ಮನ್ನಣೆ ಸಿಕ್ಕಿರುವುದು ತಳಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು
ನ್ಯೂಸ್

IPL 2025: 17 ವರ್ಷಗಳ ನಂತರ ಉದ್ಘಾಟನಾ ಪಂದ್ಯದಲ್ಲಿ KKR-RCB ಮುಖಾಮುಖಿ

ಕ್ರಿಕೆಟ್ ಅಭಿಮಾನಿಗಳು ಐಪಿಎಲ್ 2025ರ ವೇಳಾಪಟ್ಟಿಗಾಗಿ ಕಾತುರದಿಂದ ಕಾಯುತ್ತಿದ್ದರು. ಈ ಬಾರಿ 10 ತಂಡಗಳು ಆಡಲಿದ್ದು ಬಿಸಿಸಿಐ ಎಲ್ಲಾ ಪಂದ್ಯಗಳ ಸ್ಥಳ, ತಂಡಗಳು ಮತ್ತು ದಿನಾಂಕಗಳನ್ನು ಇಂದು ಪ್ರಕಟಿಸಿದೆ. ಅದರ ಪ್ರಕಾರ 18ನೇ ಋತುವಿನ ಮೊದಲ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತ್ತಾ
ನ್ಯೂಸ್

ಆರ್ಥಿಕವಾಗಿ ಜವಾಬ್ದಾರಿಯುತ ಬಜೆಟ್ ಮಂಡನೆ ಮಾಡಿ: ವಿಜಯೇಂದ್ರ ಪತ್ರ

ಬೆಂಗಳೂರು: ಮಾರ್ಚ್ 7 ರಂದು ಜನಪರ ಬಜೆಟ್ ಮಂಡನೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರ ಬರೆದಿರುವ ಅವರು, ರಾಜ್ಯದ ಸಾಮಾಜಿಕ ಕಲ್ಯಾಣದ ಜೊತೆಗೆ ಆರ್ಥಿಕ ಜವಾಬ್ದಾರಿ ಮತ್ತು ಅಭಿವೃದ್ಧಿಯನ್ನು ಆಧರಿಸಿ
Leave a Reply

Your email address will not be published. Required fields are marked *