ಚಂಡೀಗಢ: ಅಮೆರಿಕದಿಂದ ಗಡೀಪಾರು ಮಾಡಲಾದ 112 ಭಾರತೀಯರು ಇರುವ ಅಮೆರಿಕ ವಾಯುಪಡೆಯ ವಿಶೇಷ ವಿಮಾನ C17 ಗ್ಲೋಬ್‌ಮಾಸ್ಟರ್ III ಇಂದು (ಫೆ.16 ರಂದು) ರಾತ್ರಿ ತಡರಾತ್ರಿ ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ನಿರೀಕ್ಷೆಯಿದೆ.

ಅಮೆರಿಕದಿಂದ ಗಡಿಪಾರು ಮಾಡಲಾದ 112 ಜನರಲ್ಲಿ 31 ಮಂದಿ ಪಂಜಾಬ್‌ನವರು, 44 ಮಂದಿ ಹರಿಯಾಣದವರು, 33 ಮಂದಿ ಗುಜರಾತ್‌ನವರು, ಇಬ್ಬರು ಉತ್ತರ ಪ್ರದೇಶ ಮತ್ತು ಉತ್ತರಾಖಂಡದವರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ತಡರಾತ್ರಿ ಪಂಜಾಬ್‌ನ 65 ಮಂದಿ ಸೇರಿದಂತೆ 117 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕ ಮಿಲಿಟರಿ ವಿಮಾನವು ರಾತ್ರಿ 11.30 ರ ಸುಮಾರಿಗೆ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಫೆಬ್ರವರಿ 5 ರಂದು, ಅಮೆರಿಕದಿಂದ ಬಂದ ಮೊದಲ ವಿಮಾನ 104 ಗಡೀಪಾರು ಮಾಡಲ್ಪಟ್ಟವರೊಂದಿಗೆ ಅಮೃತಸರಕ್ಕೆ ತಲುಪಿತ್ತು. ಈ ಎರಡೂ ಸಂದರ್ಭಗಳಲ್ಲಿ, ಗಡಿಪಾರು ಮಾಡಿದವರ ಕೈಗಳಿಗೆ ಕೋಳ ಹಾಕಲಾಗಿತ್ತು ಮತ್ತು ಅವರ ಕಾಲುಗಳನ್ನು ಸರಪಳಿಯಿಂದ ಬಂಧಿಸಲಾಗಿತ್ತು.

ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ ಅಥವಾ ವೀಸಾ ಅವಧಿ ಮೀರಿದ ನಂತರ ಅಲ್ಲಿಯೇ ಉಳಿದುಕೊಂಡ ವ್ಯಕ್ತಿಗಳ ಮೇಲೆ ಅಮೆರಿಕ ವಲಸೆ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆಯ ಭಾಗ ಇದಾಗಿದೆ.

Indian police officials escort immigrants, wearing mask, deported from the United States
ಅಮೆರಿಕದಿಂದ ಗಡಿಪಾರು: ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಕೊಲೆ ಆರೋಪಿಯ ಬಂಧನ!
ಏತನ್ಮಧ್ಯೆ, ಪವಿತ್ರ ನಗರವಾದ ಅಮೃತಸರವನ್ನು “ಗಡಿಪಾರು ಕೇಂದ್ರ”ವನ್ನಾಗಿ ಮಾಡದಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಿನ್ನೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

“ನಮ್ಮ ಪವಿತ್ರ ನಗರ (ಅಮೃತಸರ)ವನ್ನು ಗಡಿಪಾರು ಕೇಂದ್ರವನ್ನಾಗಿ ಮಾಡಬೇಡಿ” ಎಂದು ಮಾನ್ ಹೇಳಿದ್ದರು ಮತ್ತು ಪಂಜಾಬ್‌ನಿಂದ ಬಂದ ಗಡೀಪಾರು ಮಾಡಿದವರನ್ನು ಅವರ ಊರುಗಳಿಗೆ ಕರೆದೊಯ್ಯಲು ರಾಜ್ಯ ಸರ್ಕಾರ ಸಾರಿಗೆ ವ್ಯವಸ್ಥೆಗಳನ್ನು ಮಾಡಿದೆ ಎಂದು ಅವರು ಹೇಳಿದರು.

Shares:

Related Posts

ನ್ಯೂಸ್

IPL 2025: 17 ವರ್ಷಗಳ ನಂತರ ಉದ್ಘಾಟನಾ ಪಂದ್ಯದಲ್ಲಿ KKR-RCB ಮುಖಾಮುಖಿ

ಕ್ರಿಕೆಟ್ ಅಭಿಮಾನಿಗಳು ಐಪಿಎಲ್ 2025ರ ವೇಳಾಪಟ್ಟಿಗಾಗಿ ಕಾತುರದಿಂದ ಕಾಯುತ್ತಿದ್ದರು. ಈ ಬಾರಿ 10 ತಂಡಗಳು ಆಡಲಿದ್ದು ಬಿಸಿಸಿಐ ಎಲ್ಲಾ ಪಂದ್ಯಗಳ ಸ್ಥಳ, ತಂಡಗಳು ಮತ್ತು ದಿನಾಂಕಗಳನ್ನು ಇಂದು ಪ್ರಕಟಿಸಿದೆ. ಅದರ ಪ್ರಕಾರ 18ನೇ ಋತುವಿನ ಮೊದಲ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತ್ತಾ
ಆರೋಗ್ಯ ಮತ್ತು ಜೀವನಶೈಲಿ

ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಸೂಚ್ಯಂಕ; ದೇಶದಲ್ಲೇ ಕರ್ನಾಟಕಕ್ಕೆ ಅಗ್ರಸ್ಥಾನ

ಬೆಂಗಳೂರು: ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ) ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧ್ಯಯನದ ಪ್ರಕಾರ ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಶ್ರೇಯಾಂಕದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ. ರಾಜ್ಯಕ್ಕೆ ಈ ಮನ್ನಣೆ ಸಿಕ್ಕಿರುವುದು ತಳಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು
ನ್ಯೂಸ್

ಗೊಂದಲಮಯ ಪ್ರಕಟಣೆಗಳಿಂದಾಗಿ ಕಾಲ್ತುಳಿತ

ಶನಿವಾರ ರಾತ್ರಿ ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಜನಸಂದಣಿ ನಿರ್ವಹಣೆ ಮತ್ತು ರೈಲ್ವೆ ಪ್ರಕಟಣೆಗಳಲ್ಲಿನ ಗಂಭೀರ ಲೋಪವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ದೆಹಲಿ ಪೊಲೀಸರು, ಆರಂಭಿಕ ತನಿಖೆಯ ನಂತರ, ದುರಂತಕ್ಕೆ
ಆರೋಗ್ಯ ಮತ್ತು ಜೀವನಶೈಲಿ

ವ್ಯಾಪಾರ, ಸ್ವಂತ ಉದ್ಯೋಗ ಶುರು ಮಾಡುವ ಮುನ್ನ ತಿಳಿದಿರಬೇಕಾದ ಅಂಶಗಳು

ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಎಲ್ಲರಿಗೂ ಕೆಲಸ ಸಿಗುವುದು ಅಸಾಧ್ಯ. ಸರಕಾರ ಕೂಡ ಈ ವಿಷಯದಲ್ಲಿ ಏನೂ ಮಾಡಲಾಗದು. ನಮ್ಮ ದೇಶದಲ್ಲಿ ಸಣ್ಣ ಉದ್ದಿಮೆದಾರರ ಮತ್ತು ಸ್ವಂತ ಕೆಲಸವನ್ನು ಮಾಡುವವರ ಸಂಖ್ಯೆ ಬಹಳವಿದೆ. ಬದುಕಿನ ಬಂಡಿ ಹೊಡೆಯಲು ಏನಾದರೂ
Leave a Reply

Your email address will not be published. Required fields are marked *