ಬೆಂಗಳೂರು: ಮಾರ್ಚ್ 7 ರಂದು ಜನಪರ ಬಜೆಟ್ ಮಂಡನೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ರಾಜ್ಯದ ಸಾಮಾಜಿಕ ಕಲ್ಯಾಣದ ಜೊತೆಗೆ ಆರ್ಥಿಕ ಜವಾಬ್ದಾರಿ ಮತ್ತು ಅಭಿವೃದ್ಧಿಯನ್ನು ಆಧರಿಸಿ ಬಜೆಟ್ ಮಂಡನೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಯಾವುದೇ ಒಂದು ಸರ್ಕಾರ ವಿತ್ತೀಯ ಬದ್ಧತೆ ಪೂರೈಸಲು ಸಾಲ ತೆಗೆದುಕೊಳ್ಳುವುದು ಸಹಜ. ಅಂತಹ ಸಾಲವನ್ನು ಬಂಡವಾಳ ಹೂಡಿಕೆಗಳಿಗೆ ಬಳಸಬೇಕೇ ಹೊರತು. ರಾಜಸ್ವ ವೆಚ್ಚಕ್ಕಲ್ಲ. ಆದರೆ, ಸತತ ಎರಡು ವರ್ಷ ರಾಜಸ್ವ ಕೊರತೆಯ ಬಜೆಟ್‌ ಮಂಡಿಸುವುದರೊಂದಿಗೆ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ಕಾಯ್ದೆಯ ನಿರ್ವಹಣೆಯನ್ನು ಉಲ್ಲಂಘಿಸಿದ್ದೀರಿ.

ಎಸ್‌ಸಿಪಿ–ಟಿಎಸ್‌ಪಿ ಯೋಜನೆಗೆ ಕಾಯ್ದಿರಿಸಲಾದ ಮೊತ್ತದಲ್ಲಿ 25,426 ಕೋಟಿ ರೂಗಳನ್ನು ಇತರೆ ಯೋಜನೆಗಳಿಗೆ ಬಳಸಿಕೊಂಡಿರುವುದನ್ನು ನೀವೇ ಒಪ್ಪಿಕೊಂಡಿದ್ದೀರಿ. ಅಲ್ಲದೇ, ಲೋಕೋಪಯೋಗಿ, ನೀರಾವರಿ, ಕಂದಾಯ ಸೇರಿದಂತೆ ನಾನಾ ಇಲಾಖೆಗಳು 6,000 ಕೋಟಿ ರೂ. ಬಿಲ್‌ ಬಾಕಿ ಉಳಿಸಿಕೊಂಡಿವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. 15 ಬಾರಿ ಬಜೆಟ್ ಮಂಡಿಸಿರುವ ನಿಮಗೆ ಇದು ಶೋಭೆ ತರುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.

Shares:

Related Posts

ಆರೋಗ್ಯ ಮತ್ತು ಜೀವನಶೈಲಿ

ಅಮೆರಿಕಾದಿಂದ ಗಡಿಪಾರಾದ 112 ಭಾರತೀಯರ 3ನೇ ಬ್ಯಾಚ್ ಇಂದು ಭಾರತಕ್ಕೆ

ಚಂಡೀಗಢ: ಅಮೆರಿಕದಿಂದ ಗಡೀಪಾರು ಮಾಡಲಾದ 112 ಭಾರತೀಯರು ಇರುವ ಅಮೆರಿಕ ವಾಯುಪಡೆಯ ವಿಶೇಷ ವಿಮಾನ C17 ಗ್ಲೋಬ್‌ಮಾಸ್ಟರ್ III ಇಂದು (ಫೆ.16 ರಂದು) ರಾತ್ರಿ ತಡರಾತ್ರಿ ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ನಿರೀಕ್ಷೆಯಿದೆ. ಅಮೆರಿಕದಿಂದ ಗಡಿಪಾರು ಮಾಡಲಾದ 112 ಜನರಲ್ಲಿ
ನ್ಯೂಸ್

ಗೊಂದಲಮಯ ಪ್ರಕಟಣೆಗಳಿಂದಾಗಿ ಕಾಲ್ತುಳಿತ

ಶನಿವಾರ ರಾತ್ರಿ ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಜನಸಂದಣಿ ನಿರ್ವಹಣೆ ಮತ್ತು ರೈಲ್ವೆ ಪ್ರಕಟಣೆಗಳಲ್ಲಿನ ಗಂಭೀರ ಲೋಪವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ದೆಹಲಿ ಪೊಲೀಸರು, ಆರಂಭಿಕ ತನಿಖೆಯ ನಂತರ, ದುರಂತಕ್ಕೆ
ಆರೋಗ್ಯ ಮತ್ತು ಜೀವನಶೈಲಿ

ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಸೂಚ್ಯಂಕ; ದೇಶದಲ್ಲೇ ಕರ್ನಾಟಕಕ್ಕೆ ಅಗ್ರಸ್ಥಾನ

ಬೆಂಗಳೂರು: ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ) ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧ್ಯಯನದ ಪ್ರಕಾರ ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಶ್ರೇಯಾಂಕದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ. ರಾಜ್ಯಕ್ಕೆ ಈ ಮನ್ನಣೆ ಸಿಕ್ಕಿರುವುದು ತಳಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು
ನ್ಯೂಸ್

IPL 2025: 17 ವರ್ಷಗಳ ನಂತರ ಉದ್ಘಾಟನಾ ಪಂದ್ಯದಲ್ಲಿ KKR-RCB ಮುಖಾಮುಖಿ

ಕ್ರಿಕೆಟ್ ಅಭಿಮಾನಿಗಳು ಐಪಿಎಲ್ 2025ರ ವೇಳಾಪಟ್ಟಿಗಾಗಿ ಕಾತುರದಿಂದ ಕಾಯುತ್ತಿದ್ದರು. ಈ ಬಾರಿ 10 ತಂಡಗಳು ಆಡಲಿದ್ದು ಬಿಸಿಸಿಐ ಎಲ್ಲಾ ಪಂದ್ಯಗಳ ಸ್ಥಳ, ತಂಡಗಳು ಮತ್ತು ದಿನಾಂಕಗಳನ್ನು ಇಂದು ಪ್ರಕಟಿಸಿದೆ. ಅದರ ಪ್ರಕಾರ 18ನೇ ಋತುವಿನ ಮೊದಲ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತ್ತಾ
Leave a Reply

Your email address will not be published. Required fields are marked *