ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2025 ರ ಪ್ರಶಸ್ತಿ ಪಂದ್ಯಕ್ಕೆ ಇಡೀ ವಿಶ್ವವೇ ಕಾತುರತೆಯಿಂದ ಕಾಯುತ್ತಾ ಇತ್ತು ಎಂದರೇ ತಪ್ಪಾಗಲಾರದು.
ಕಂಡರಿಯದ ಜೋಷ್ ಆರ್ಸಿಬಿ ಅಭಿಮಾನಿಗಳಲ್ಲಿ ಮನೆ ಮಾಡಿದ್ದು, ೧೮ ವರ್ಷಗಳ ಕಾಯುವಿಕೆ ಅವರನ್ನು ನಿರಾಸೆಗೊಳಿಸಲಿಲ್ಲ ಎನ್ನುವುದು ಆನಂದದ ಸಂಗತಿ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ರೋಚಕ ಪಂದ್ಯದಲ್ಲಿ ಆರ್ಸಿಬಿ ತಂಡ ಅಪ್ರತಿಮ ಆಟ ಆಡಿ ಗೆಲುವು ಸಾಧಿಸಿದೆ. ಮೈ ನವಿರೇಳಿಸುವ ಆಟಕ್ಕೆ ಕ್ರೀಡಾಂಗಣ ಸಾಕ್ಷಿಯಾಗಿದ್ದು, ಕನ್ನಡಿಗರಿಗಂತೂ ಹಬ್ಬವಾಗಿದೆ.
ಎರಡೂ ತಂಡಗಳು ಬಹಳ ಸಮಯದ ನಂತರ ಫೈನಲ್ ತಲುಪಿದ್ದು, ಇಲ್ಲಿಯವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲವಾದ್ದರಿಂದ ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಅದು ಅವರ ಚೊಚ್ಚಲ ಐಪಿಎಲ್ ಪ್ರಶಸ್ತಿ. ಆರ್ಸಿಬಿ ತಂಡ ಆರಂಭದಿಂದಲೂ ಉತ್ತಮ ಫಾರ್ಮ್ನಲ್ಲೇ ಇತ್ತು, 19 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗವೂ ಅತ್ಯಂತ ಬಲಿಷ್ಠವಾಗಿ ಕಂಡಿತ್ತು.ಇತ್ತ ಪಂಜಾಬ್ ಕಿಂಗ್ಸ್ ಕೂಡ 19 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇತ್ತು.
ಇದು ಬೆಂಗಳೂರಿನ ನಾಲ್ಕನೇ ಐಪಿಎಲ್ ಫೈನಲ್. ಇದಕ್ಕೂ ಮೊದಲು ತಂಡವು 3 ಬಾರಿ ಸೋಲನ್ನು ಎದುರಿಸಿತ್ತು. 2009 ರಲ್ಲಿ ಮೊದಲು ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋಲನುಭವಿಸಿತು. ನಂತರ 2011 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು. ನಂತರ 2016 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಬೆಂಗಳೂರು ತಂಡವನ್ನು ಕೇವಲ 8 ರನ್ಗಳ ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಇದೀಗ ಗೆಲುವಿನ ನಗೆ ಬೀರಿರುವ ಆರ್ಸಿಬಿ ಗೆ ಅಭಿಮಾನಿಗಳು ಅಂಭಿನಂದನೆಗಳ ಸುರಿಮಳೆಯೇ ಸುರಿಸಿದ್ದಾರೆ.